October 20, 2025

ಮುಸ್ಸಂಜೆ

ಪ್ರಭಾವಶಾಲಿ ಕನ್ನಡ ಸಂಜೆ ದಿನ ಪತ್ರಿಕೆ

ಪೊಲೀಸರ ಹಲ್ಲೆಯನ್ನು ಖಂಡಿಸಿ ಪಂಚಮ ಸಾಲಿ ಸಮುದಾಯ ಪ್ರತಿಭಟನೆಗೆ ನಿರ್ಧಾರ

 

ಗಂಗಾವತಿ.11ಬೆಳಗಾವಿಯಲ್ಲಿ ಪೊಲೀಸ್ ರು ಹಲ್ಲೆಯನ್ನು ಖಂಡಿಸಿ ಪ್ರತಿಭಟನೆಯನ್ನು ನಡೆಸಲು ಗಂಗಾವತಿ ನಗರದ ಕೊಟ್ಟೂರೇಶ್ವರ ದೇವಸ್ಥಾನ ಆವರಣದಲ್ಲಿ ಪಂಚಮ ಸಾಲಿ ಸಮಾಜದ ವತಿಯಿಂದ ಸಮಾಜದವರ ಪೂರ್ವಭಾವಿ ಸಭೆಯನ್ನು ಬುಧವಾರ ನಡೆಸಲಾಯಿತು.

ಸಮಾಜದ ಅಧ್ಯಕ್ಷ ಶಿವಪ್ಪ ಯಲಬುರ್ಗಿ ಮಾತನಾಡಿ, ಪಂಚಮಸಾಲಿ ಸಮಾಜದವರಿಗೆ ನ್ಯಾಯಯುತವಾಗಿ ನೀಡಬೇಕಾಗಿರುವ ೨ಎ ಮೀಸಲಾತಿಯನ್ನು ನೀಡಬೇಕು ಎಂದು ಒತ್ತಾಯಿಸಿ, ಪಂಚಮಸಾಲಿ ಸಮಾಜದ ವತಿಯಿಂದ ಬೆಳಗಾವಿಯಲ್ಲಿ ಸಮಾಜದ ಶ್ರೀಗಳ ನೇತೃತ್ವದಲ್ಲಿ ಪ್ರತಿಭಟನೆಯನ್ನು ನಡೆಸಲಾಗುತ್ತಿತ್ತು. ಆದರೆ ಪ್ರತಿಭಟನೆಯನ್ನು ಹತ್ತಿಕ್ಕುವ ಉದ್ದೇಶದಿಂದ ಪೊಲೀಸ್ ಇಲಾಖೆಯವರು ಪ್ರತಿಭಟನಕಾರರ ಮೇಲೆ ಹಲ್ಲೆಯನ್ನು ನಡೆಸಿದ್ದಾರೆ. ಮನಸ್ಸು ಬಂದ ರೀತಿಯಲ್ಲಿ ಲಾಠಿ ಚಾರ್ಜ್ ಮಾಡಿರುವ ಕಾರಣಕ್ಕೆ ಪಂಚಮಸಾಲಿ ಸಮಾಜದವರು ಗಂಬೀರವಾಗಿ ಗಾಯ ಗೊಂಡಿದ್ದಾರೆ. ಉದ್ದೇಶ ಪೂರ್ವಕವಾಗಿಯೇ ಲಾಠಿ ಚಾರ್ಜ್ ನಡೆಸಿ, ಪ್ರತಿಭಟನೆಯನ್ನು ಚದುರಿಸಿದ್ದಾರೆ. ಅದನ್ನು ಸಮಾಜವು ಖಂಡಿಸುತ್ತದೆ. ನ್ಯಾಯಯುತವಾಗಿ ನೀಡಬೇಕಾಗಿರುವ ೨ಎ ಮೀಸಲಾತಿಯನ್ನು ನೀಡಬೇಕು ಎಂದು ಒತ್ತಾಯಿಸುವುದು ತಪ್ಪು ಎನ್ನುವ ರೀತಿಯಲ್ಲಿ ಹಲ್ಲೆ ನಡೆಸಿರುವುದು ಸರಿಯಲ್ಲ. ಪೊಲೀಸ್ ನಡೆದುಕೊಂಡಿರುವ ರೀತಿಯನ್ನು ಖಂಡಿಸಿ, ಹಲ್ಲೆ ಮಾಡಿದ ಪೊಲೀಸರನ್ನು ಅಮಾನತ್ತು ಮಾಡಲು ಒತ್ತಾಯಿಸಿ, ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಪಂಚಮಸಾಲಿ ಸಮಾಜದ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ. ಅದೇ ರೀತಿಯಾಗಿ ಗಂಗಾವತಿಯಲ್ಲೂ ಕೂಡ ಡಿಸೆಂಬರ್ 12 ರಂದು ಬೃಹತ್ ಮಟ್ಟದ ಪ್ರತಿಭಟನೆಯನ್ನು ನಡೆಸಲಾಗುವುದು. ಪ್ರತಿಭಟನೆಯು ಬೆಳಗ್ಗೆ ಎಪಿಎಂಸಿಯಿಂದ ಬೃಹತ್ ಮೆರವಣಿಗೆಯ ಮೂಲಕ ಸಿಬಿಎಸ್ ಸರ್ಕಲ್‌ವರೆಗೆ ಮೆರವಣಿಗೆಯನ್ನು ನಡೆಸಿ, ರಸ್ತೆಯನ್ನು ಬಂದ್ ಮಾಡಿ, ಪ್ರತಿಭಟನೆಯನ್ನು ನಡೆಸಲಾಗುವುದು. ಸಮಾಜದ ಮುಖಂಡರು, ಯುವ ಸಂಘಟನೆಯವರು ಸೇರಿದಂತೆ ಪ್ರತಿಯೊಬ್ಬರು ಸ್ವಯಂ ಪ್ರೇರಣೆಯಿಂದ ಪ್ರತಿಭಟನೆಯಲ್ಲಿ ಭಾಗವಹಿಸಿ ಸರಕಾರಕ್ಕೆ ಬಿಸಿ ಮುಟ್ಟಿಸಬೇಕು ಎಂದು ಹೇಳಿದರು.

ಪಂಚಮಸಾಲಿ ಸಮಾಜದ ಮುಖಂಡರಾದ ನಾಗರಾಜ ಬರಗೂರು, ದೇವರಾಜ ಕತ್ತಿ, ಮಂಜುನಾಥ ಹೊಸ್ಕೇರಾ, ಆರ್.ದೇವಾನಂದ, ಮಹೇಶ್, ಹನುಮಂತಪ್ಪ, ಜಡಿಯಪ್ಪ, ಶಿವಕುಮಾರ ಮಾಲಿಪಾಟೀಲ್, ಚಂದ್ರಶೇಖರ ಹಿರೂರು, ಶರಣಪ್ಪ, ಶಂಕರ್, ಶಿವಕುಮಾರ ಹಾಗೂ ಇತರರಿದ್ದರು.

ಗಂಗಾವತಿಯ ಕೊಟ್ಟೂರೇಶ್ವರ ದೇವಸ್ಥಾನದಲ್ಲಿ ಪಂಚಮಸಾಲಿ ಸಮಾಜದ ವತಿಯಿಂದ ಪ್ರತಿಭಟನೆಯ ನಡೆಯುವ ಕುರಿತು ಪೂರ್ವಭಾಭಿ ಸಭೆಯನ್ನು ಬುಧವಾರ ನಡೆಸಲಾಯಿತು.