October 20, 2025

ಮುಸ್ಸಂಜೆ

ಪ್ರಭಾವಶಾಲಿ ಕನ್ನಡ ಸಂಜೆ ದಿನ ಪತ್ರಿಕೆ

ಪಂಚಮಸಾಲಿ ಸಮಾಜದವರ ಮೇಲಿನ ಲಾಠಿಚಾರ್ಜ ಖಂಡನೀಯ: ಹಾಲಪ್ಪ ಆಚಾರ್

 

ಕೊಪ್ಪಳ : ಕರ್ನಾಟಕ ರಾಜ್ಯದ ಲಿಂಗಾಯತ ಪಂಚಮಸಾಲಿ ಸಮಾಜದ ಬಹುದಿನಗಳ ಬೇಡಿಕೆಯಾದ 2ಎ ಮಿಸಲಾತಿ ಹೋರಾಟವನ್ನು ಗೌರವಿಸುವ ಬದಲು ಸರಕಾರ ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವದು ಕಾನೂನುಬಾಹಿರ ಕ್ರಮವಾಗಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.

ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಪಂಚಮಸಾಲಿ ಸಮಾಜದಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ತಹಸೀಲ್ದಾರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ಬೆಳಗಾವಿ ಅಧಿವೇಶನದಲ್ಲಿ ತಮ್ಮ ಹಕ್ಕನ್ನು ಕೇಳಲು ಹೋದ ಸಮಾಜದ ಬಾಂದವರ ಮೇಲೆ ಸರಕಾರ ಲಾಠಿಚಾರ್ಜ ಮಾಡಿರುವ ಕ್ರಮ ಅತ್ಯಂತ ಖಂಡನೀಯವಾದದು ಇದು ಸಂವಿಧಾನ ವಿರೋಧಿ ಕೃತ್ಯವಾಗಿದೆ ಆದ್ದರಿಂದ ಇದರಲ್ಲಿ ಭಾಗಿಯಾದ ಪೋಲಿಸ್ ಇಲಖೆಯ ಎಲ್ಲಾ ಅಧಿಕಾರಿಗಳನ್ನು ತಕ್ಷಣ ವಜಾ ಮಾಡಬೇಕು ಎಂದರು.

ಸಮಾಜದ ಹಿರಿಯ ಮುಖಂಡರಾದ ಬಸವಲಿಂಗಪ್ಪ ಭೂತೆ ಮಾತನಾಡಿ ನಮ್ಮ ಸಮಾಜದ ಬೇಡಿಕೆಯನ್ನು ನ್ಯಾಯಯುತವಾಗಿ ಕೇಳಲು ಹೊದಂತಹ ನಮ್ಮ ಸಮಾಜದ ಗುರುಗಳಾದ ಶ್ರೀ ಜಯಮೃತ್ಯುಂಜಯ ಮಹಾಸ್ವಾಮೀಗಳನ್ನು ಹಾಗೂ ಅನೇಕ ಹಿರಿಯ ನಾಯಕರುಗಳನ್ನ ಬಂದಿಸಿ ಹಾಗೂ ಅಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅನೇಕ ನಮ್ಮ ಸಮಾಜದ ಬಂಧುಗಳ ಮೇಲೆ ಲಾಠಿಚಾರ್ಜ ಮಾಡಿ ಅನೇಕರು ಗಾಯಗೊಂಡಿದ್ದು ಇದರಿಂದ ಹೋರಾಟವನ್ನು ಸರಕಾರ ಪೋಲಿಸ್ ಇಲಾಖೆಯನ್ನ ಉಪಯೋಗಿಸಿಕೊಂಡು ಹೋರಾಟ ಹತ್ತಿಕ್ಕುವ ಹುನ್ನಾರ ಮಾಡುತ್ತಿದೆ ಅದನ್ನು ಬಿಟ್ಟು ನಮ್ಮ ಬೇಡಿಕೆ ಇಡೇರಿಸಬೇಕು ಇಲ್ಲವಾದಲ್ಲಿ ಮುಂದೆ ಸರಕಾರ ಪತನಕ್ಕೂ ಕಾರಣವಾಗಬಹುದು ಎಂದರು.

ಈ ಸಂದರ್ಭದಲ್ಲಿ ಸಮಾಜದ ತಾಲೂಕ ಅಧ್ಯಕ್ಷರಾದ ರಾಜು ಪಲ್ಲೇದ. ಮುಖಂಡರಾದ ಶರಣಪ್ಪ ರಾಂಪೂರ.ವರಾಜಶೇಖರ ನಿಂಗೋಜಿ.ಕಲ್ಲನಗೌಡ್ರ ಓಜನಹಳ್ಳಿ.ಸುರೇಶಗೌಡ ಶಿವನಗೌಡ್ರ. ಅಮರೇಶ ಹುಬ್ಬಳ್ಳಿ. ಎಸ್ ಎನ್ ಶ್ಯಾಗೋಟಿ. ಕಲ್ಲಪ್ಪ ಕರಮುಡಿ. ಶಿವಕುಮಾರ ಮ್ಯಾಗೇರಿ. ಸೇರಿದಂತೆ ಅನೇಕರು ಹಾಜರಿದ್ದರು.